ಹಕ್ಕಿಗಳು ನಮ್ಮ ನಿತ್ಯ ಜೀವನದಲ್ಲಿ ಅತಿಹೆಚ್ಚಾಗಿ ನೋಡುವ ವನ್ಯಜೀವಿಗಳು. ಇವು ಎಲ್ಲರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತವೆ. ಮೊದಮೊದಲಿಗೆ ನಾನು ನಮ್ಮಲ್ಲಿ ಕೇವಲ ಕಾಗೆ, ಗುಬ್ಬಿ, ಗಿಳಿ, ಹದ್ದು, ಗೂಬೆ, ಮೈನಾ ಇವೇ ಮುಂತಾದ ಬೆರಳೆಣಿಕೆಯಷ್ಟು ಹಕ್ಕಿಗಳು ಮಾತ್ರ ನಮ್ಮಲ್ಲಿವೆ ಎಂದು ತಿಳಿದಿದ್ದೆ. ತೊಂಬತ್ತೈದರಲ್ಲಿ ನಾನು ಹಕ್ಕಿಗಳನ್ನು ನೋಡಲು ಮೈಸೂರಿಗೆಹೋಗುತ್ತಿದ್ದೆ. ಅಲ್ಲಿ ಮ್ಯಾನ್ ಸಂಸ್ಥೆಯ ಮನು ಹಾಗೂ ಅವರ ಗೆಳೆಯರೊಂದಿಗೆ ಬನ್ನೂರು, ಯಳಂದೂರು, ಕೊಳ್ಳೇಗಾಲ ಮುಂತಾದ ಊರುಗಳ ಸಾಲು ಸಾಲು ಕೆರೆಗಳ ಸಾವಿರಾರು ಸಂಖ್ಯೆಯ ವಿವಿಧ ವಲಸೆ ಹಕ್ಕಿಗಳನ್ನು ನೋಡಿ ರೋಮಾಂಚನವಾಗುತ್ತಿತ್ತು.ಯಾವಾಗ ಹೊಸಪೇಟೆಯ ಸುತ್ತಲಿನ ಕೆರೆಗಳು, ತುಂಗಭದ್ರಾ ಅಣೆಕಟ್ಟಿನ ಹಿನ್ನಿರಿನ ಪ್ರದೇಶ, ದರೋಜಿ ಕರಡಿ ಧಾಮದಲ್ಲಿ ದುರ್ಬೀನು ಹಾಗೂ ಸಲೀಂ ಅಲಿಯವರು ಬರೆದ ಪಕ್ಷಿ ವೀಕ್ಷಕರ ಮಾರ್ಗದರ್ಶಿ ಪುಸ್ತಕ ಹಿಡಿದುಕೊಂಡು ಹುಚ್ಚನಂತೆ ತಿರುಗಾಡಿದಾಗ ಗೊತ್ತಾಗಿದ್ದು ನಮ್ಮ ಬಯಲು ಸೀಮೆ-ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚಿನ ಖಗಸಿರಿ ಇರುವುದೆಂದು. ಮತ್ತೆ ಮೂರು ವರ್ಷಗಳ ಹಿಂದೆ ಬಯಲು ಸೀಮೆಯ ಹಕ್ಕಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಆರಂಭಿಸಿದಾಗಲಂತೂ ಹೊಸಜಗತ್ತೇ ನನ್ನ ಮುಂದೆ ತೆರೆದುಕೊಂಡಿತು. ನಮ್ಮ ಸುತ್ತಮುತ್ತಲು ಎಷ್ಟೊಂದು ವೈವಿದ್ಯಮಯ ಜೀವಜಗತ್ತು ಇದೆ ಗೊತ್ತೇ? ಅದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಬನ್ನಿ. ಸ್ವಾಗತ ನಿಮಗೆ ಖಗಲೋಕಕ್ಕೆ.

1 comment:
Dear Sir,
Sir you have done a great job. you are the one who is rising from our dry area of north karnataka.
Everybody think Bellary dist. and wildlife no way no chance but we know that very short time ago here hunters killed around 40 Tigers of about 10 feet lenagth, i have those photographs. but now time has changed we are surching life in dead vallies of SANDUR. I am not taking about bringing tigers back, but what we have now its our responsibility to take that to next generations of this dry land.
commandable work sir. Good luck sir.
I am Vidyadhara NM, I hope you will remember me, I am your Student in High school, Bandri. your are the person who has ignated the thinking of science & wildlife in me.
Sir You know that I am your follower in Bandri High school after leaving school we never met again. Recently & Unexpectedly when i searched by word "TB Dam" in google i found a small bird nesting and copyright word Samad Kottur. Then i saw all your photographs for more than one hour.
Sir, you know me and my photography hoppy. In sandur I have opened " Sri karthikeya Hitech Studio " and till today my views and opinions about you are uncharged you r my best teacher and i am your student.
I now have Nikon D 300 Camera and
28-200 lens. Sir, I am intrested in photographing wildlife. I seek your guidence.
regards,
Vidyadhara NM,
97425 34362.
Post a Comment