ನಾನು - ಸಮದ್ ಕೊಟ್ಟೂರು, ನಿಮ್ಮೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಬಲು ಖುಷಿ ಆಗುತ್ತಿದೆ. ಹುಟ್ಟಿದ್ದು , ಬೆಳೆದಿದ್ದು, ಓದಿದ್ದು -ನನ್ನೂರು ಕೊಟ್ಟೂರಿನಲ್ಲೇ. ಎಂತಹ ಸುಂದರ ಪರಿಸರ, ಎಂಥಹ ವಾತಾವರಣ ಅಲ್ಲಿದೆ ಗೊತ್ತೇ. ಬಿ. ಎಸ್ಸಿ ಮುಗಿಸಿ ಅಲ್ಲಿಂದ ಓದಲು ಚಿತ್ರದುರ್ಗದಲ್ಲಿ ಒಂದು ವರ್ಷ ಕಳೆದು ನಂತರ ನೌಕರಿ. ಮತ್ತೆ ಆರು ತಿಂಗಳಿಗೋ ವರ್ಷಕ್ಕೊಮ್ಮೆಯೋ ಕೊಟ್ಟೂರಿಗೆ ಹೋಗುತ್ತೇನೆ.
ನಾನು ಪ್ರೌಢಶಾಲಾ ಶಿಕ್ಷಕನಾಗಿ ಸೊಂಡೂರು ತಾಲೂಕಿನ ಬಂಡ್ರಿ ಎಂಬ ಗ್ರಾಮದಲ್ಲಿ ಕೆಲಸಕ್ಕೆ ಸೇರಿದಾಗ ಅದೊಂದು ಅಧ್ಭುತ ಲೋಕಕ್ಕೆ ಬಂದಂತಾಗಿತ್ತು. ವಾರಕ್ಕೊಮ್ಮೆ ಮಕ್ಕಳ ಸೈನ್ಯವನ್ನು ಕಟ್ಟಿಕೊಂಡು ಅಲ್ಲಿನ ಸುಂದರ ಕಾಡಿನಲ್ಲಿ ಓಡಾಡಿ, ನೆಲ್ಲಿಕಾಯಿ, ಸೀತಾಫಲ ಮುಂತಾದ ಹಣ್ಣು ಹಂಪಲುಗಳನ್ನು ತರುತತಿದ್ದೆವು. ಅಪರೂಪದ ಸೈಕಾಸ್ ಎಂಬ ಮರಗಿಡಗಳು, ಗೌರಿ ಹೂವು ಎಂಬ ಅಪರೂಪದ ಔಷಧಿ ಗಿಡವನ್ನು ನೋಡಿ ರೋಮಾಂಚನವಾಗುತ್ತಿತ್ತು. ಈ ಬಂಡ್ರಿ ಗ್ರಾಮದಲ್ಲೇ ನನಗೆ ಪರಿಸರ, ಪ್ರಾಣಿ-ಪಕ್ಷಿ ಕುರಿತು ಪ್ರೀತಿ ಕಾಳಜಿ ಬೆಳೆದಿದ್ದು.
ಈಗ ಒಂದೂವರೆ ದಶಕದಿಂದ ಸಾಕಷ್ಟು ಕಲಿತಿದ್ದೇನೆ. ಇನ್ನೂ ಕಲಿಯಬೇಕಾದುದು ಬಹಳಷ್ಟು ಇದೆ. ಇಲ್ಲಿಯವರೆಗೆ ನಾನುಅನುಭವಿಸಿದ ಸುಂದರ ಪರಿಸರ, ನೋಡಿದ ಸುಂದರ ಹಕ್ಕಿಗಳು, ಮಾಡಿದ ಕೆಲವು ಹೆಮ್ಮೆಯಿಂದ ಹೇಳಿಕೊಳ್ಳುವಂಥಹ ಘಟನೆಗಳುನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನಮಸ್ಕಾರ.

No comments:
Post a Comment